_______________________________
                ವಿಷ್ಣುವರ್ಧನ್ ಸಾಮರಸ್ಯ ಉತ್ತೇಜಿಸಲು ಮತ್ತು ಪ್ರವಾಹಗಳಲ್ಲಿ ವಿಪತ್ತಿಗೊಳಗಾದ ಜನರಿಗೆ ಸಹಾಯ ಮಾಡಲು ಸ್ನೇಹಲೋಕ ಎಂಬ ಸಂಸ್ಥೆಯನ್ನು ಆರಂಭಿಸಿದರು. ಅವರು ವೈಯಕ್ತಿಕವಾಗಿಯು ಸಹಾಯ ಮಾಡುವಲ್ಲಿ ಹೆಸರುವಾಸಿಯಾಗಿದ್ದರು. ಅವರು ಮೈಸೂರು ವಿಕ್ರಮ್ ಆಸ್ಪತ್ರೆ ರಾಯಭಾರಿಯಾಗಿ ಮತ್ತು ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಗ್ರಾಮೀಣ ಮಕ್ಕಳ ಚಿಕಿತ್ಸೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಅವರು ರಾಜ್ಯದ ಉತ್ತರ ಭಾಗದಲ್ಲಿನ ಪ್ರವಾಹಕ್ಕೆ ಒಳಗಾದ ಜನರಿಗೆ ಹಣದ ಸಹಾಯ ಮಾಡಲು 'ಪಾದಯಾತ್ರೆಯನ್ನು' ನಡೆಸಿದರು.ವಿಷ್ಣುವರ್ಧನ್ ಮತ್ತು ಅವರ ಪತ್ನಿ ಭಾರತಿ ಅವರು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಕೊಳವೆಬಾವಿಗಳನ್ನು ತೆಗೆಸಿದ್ದಾರೆ.ಜನವರಿ 2005 ರಲ್ಲಿ ಬೆಂಗಳೂರು ಇನ್ಸ್ಟಿಟ್ಯೂಟ್ ಆನ್ಕಾಲಜಿ (ಬಯೋ) ೧೫ ವರ್ಷಗಳ ನೆನಪಿಗಾಗಿ ಆಯೋಜಿಸಿದ್ದ ಕ್ಯಾನ್ಸರ ಜಾಗೃತಿ ಧನಸಂಗ್ರಹ ಪಾದಯಾತ್ರೆಯಲ್ಲಿ ವಿಷ್ಣುವರ್ಧನ್, ಕ್ರಿಕೆಟಿಗ ಸೈಯದ್ ಕಿರ್ಮಾನಿ ಮತ್ತು ಹಿರಿಯ ನಟ ಶಿವರಾಮ ಅವರು ಭಾಗವಹಿಸಿದ್ದರು.