ಜೀವನಚರಿತ್ರೆ

_______________________________

ಡಾ. ವಿಷ್ಣುವರ್ಧನರವರು ಕರ್ನಾಟಕ ಮತ್ತು ಪ್ರಪಂಚದಾದ್ಯಂತ ಪ್ರಚಂಡ ಅಭಿಮಾನಿಗಳನ್ನು ಹೊಂದಿದ್ದ ಪ್ರಸಿದ್ಧ ಕನ್ನಡ ನಟನಾಗಿದ್ದರು. ಅವರು ವೃತ್ತಿಜೀವನದಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಹಲವು ಪ್ರಶಸ್ತಿಗಳನ್ನು ಮತ್ತು ಗೌರವವನ್ನು ಸಂಪಾದಿಸಿದ್ದಾರೆ.


Highlights of Dr. Vishnuvardhana’s career


  • ಅವರ 37 ವರ್ಷಗಳ (1972-2009) ಚಲನಚಿತ್ರ ವೃತ್ತಿಜೀವನದಲ್ಲಿ ಡಾ. ವಿಷ್ಣುವರ್ಧನವರು ಕನ್ನಡ (200), ಹಿಂದಿ(5), ತೆಲುಗು (5), ಮಲಯಾಳಂ (3) ಮತ್ತು ತಮಿಳು (6) ಚಿತ್ರಗಳು ಸೇರಿದಂತೆ 220 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  • 1972ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡರವರ ನಿರ್ದೇಶನದ ವಂಶವೃಕ್ಷ ಎಂಬ ಒಂದು ಕಲಾತ್ಮಕ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

  • ಕನ್ನಡ ಚಿತ್ರರಂಗದ ಮಹಾನ್ ನಿರ್ದೇಶಕರಲ್ಲಿ ಒಬ್ಬರಾದ ದಿವಂಗತ ಪುಟ್ಟಣ್ಣ ಕಣಗಾಲರ ನಾಗರಹಾವು ಚಿತ್ರದಲ್ಲಿ ಮೊಟ್ಟ ಮೊದಲಿಗೆ ನಾಯಕನಾಗಿ ನಟಿಸಿದರು. ನಾಗರಹಾವು ಚಲನಚಿತ್ರವು ಅವತ್ತಿನ ದಿನಗಳಲ್ಲಿ ಬೃಹತ ಸಂಚಲನ ಮತ್ತು ಇತಿಹಾಸ ರಚಿಸಿದ ಚಿತ್ರಗಳಲೊಂದು. ಈ ಚಿತ್ರದ ಬಳಿಕ ಪುಟ್ಟಣ್ಣ ಕಣಗಾಲರು ವಿಷ್ಣುವರ್ಧನರ ಮೂಲ ಹೆಸರಾದ ಸಂಪತ್ ಕುಮಾರ್ ನಿಂದ ವಿಷ್ಣುವರ್ಧನ ಎಂದು ಬದಲಾಯಿಸಿದರು.

  • ಅವರ ಮೊದಲ ಸಿನಿಮಾ " ನಾಗರಹಾವು " ಮತ್ತು ಅವರ ಕೊನೆಯ ಚಿತ್ರ ಆಪ್ತರಕ್ಷಕ ಚಿತ್ರಗಳು ಇತಿಹಾಸದಲ್ಲೇ ಹೆಚ್ಚು ಯಶಸ್ಸು ಕಂಡ ಚಿತ್ರಗಳಾಗಿ ದಾಖಲಿಸಿದವು.

  • ಡಾ. ವಿಷ್ಣುವರ್ಧನನರ ಹಲವಾರು ಚಿತ್ರಗಳು ಬೃಹತ ಮಟ್ಟದ ಜನಮನ್ನಣೆ ಹಾಗೂ ಹಲವಾರು ಪುರಸ್ಕಾರಗಳನ್ನು ಗಳಿಸಿವೆ ಅದರ ಜೊತೆಗೆ ನಿರ್ಮಾಪಕರಿಗೆ ಎತ್ತೆಚ್ಚು ಲಾಭವನ್ನು ತಂದು ಕೊಟ್ಟಿವೆ.

  • ಅವರು ಡಾ ಚಂದ್ರಶೇಖರ್ ಕಂಬಾರವರ ಕಾದಂಬರಿ ಆಧಾರಿತ ಹರಕೆಯ ಕುರಿ ಅಂತಹ ಚಿತ್ರಗಳಲ್ಲೂ ನಟಿಸಿದ್ದಾರೆ.


  • ಅವರು ಪ್ರಣಯ, ಸಾಹಸ, ಭಾವನಾತ್ಮಕ, ಸಂಗೀತ, ಹಾಸ್ಯ ಮತ್ತು ಕೌಟುಂಬಿಕ ಸಿನಿಮಾ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಕನ್ನಡ ಚಿತ್ರರಂಗ ಕಂಡ ಅತ್ಯಂತ ಬಹುಮುಖ, ಪ್ರತಿಭಾವಂತ, ಸೊಗಸಾದ, ಸದ್ರೂಪಿ, ಸ್ಪಷ್ಟ ಕನ್ನಡ ಮಾತಾಡಬಲ್ಲ ಮತ್ತು ಅಂತ್ಯಂತ ಜನಪ್ರಿಯ ನಟನೆಂದು ಗುರುತಿಸಿಕೊಂಡಿದ್ದರು. ಹಾಗೂ ಅವರ ಸಾವಿನ ಬಳಿಕವೂ ಜನಪ್ರಿಯತೆ ಹಾಗೆಯೇ ಜನಮಾನಸದಲ್ಲಿ ಉಳಿದುಕೊಂಡಿದೆ.

  • ವಿಷ್ಣುರವರು ಹಲವಾರು ಚಿತ್ರಗಳಲ್ಲಿ ಹಾಡಿದ್ದಾರೆ, ಅವರು ಮೊದಲು "ಈ ನೋಟಕೆ ಮೈ ಮಾಟಕೆ..." ಎಂಬ ಹಾಡನ್ನು ನಾಗರಹೊಳೆ ಚಿತ್ರದಲ್ಲಿ ಹಾಡಿದ್ದಾರೆ. ಅವರು ಕೆಲವು ಭಕ್ತಿಗೀತೆಗಳನ್ನು ಹಾಡಿದ್ದಾರೆ ಅವುಗಳೆಂದರೆ "ಜ್ಯೋತಿರೂಪ ಅಯ್ಯಪ್ಪ" , "ತಾಯಿ ಬನಶಂಕರಿ" , "ವಿಶ್ವಪ್ರೇಮಿ ಅಯ್ಯಪ್ಪ" , "ಧರ್ಮಸ್ಥಳ ದೇವರು ಮಂಜುನಾಥಸ್ವಾಮಿ" ,"ಮಲೆಮಾದೇಶ್ವರ" ಮತ್ತು "ರಣಚಂಡಿ ಚಾಮುಂಡಿ" ಅಂತಹ ಭಕ್ತಿ ಹಾಡುಗಳನ್ನು ಹಾಡಿದ್ದಾರೆ. ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ.

  • ೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್‌ ನಾಗ್‌ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಕಂತೊಂದರಲ್ಲಿ (ರುಪೀಸ್‌ ಫಾರ್ಟಿ-ಫೈವ್ ಎ ಮಂತ್‌) ವಿಷ್ಣುವರ್ಧನ್‌ ನಟಿಸಿದ್ದರು.

  • ಅವರ ಸಿನಿಮಾಗಳಲ್ಲಿ ತಾವಾಗಿಯೇ ಸಾಹಸಗಳನ್ನು ಮಾಡತ್ತಿದ್ದರು.

  • ಅವರ ಮರಣದ ನಂತರವೂ, ಡಾ.ವಿಷ್ಣುವರ್ಧನ್ ಅಭಿಮಾನಿಗಳು ಅವರ ಬಹುಜನಪ್ರಿಯ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಿಸಿ ಜನಮಾನಸದಲ್ಲಿ ರಾರಾಜಿಸುತ್ತಿದ್ದಾರೆ. ಹಾಗೆಯೇ ತಮ್ಮ ಮೊಮ್ಮಕ್ಕಳಾದ ಜ್ಯೇಷ್ಠ ಮತ್ತು ಶ್ಲೋಕರವರ ಸಹಾಯದಿಂದ ಪತ್ತೇದಾರ ಸಾಹಸಸಿಂಹ ಕಾಮಿಕ್ಸ್ ಸರಣಿಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುತ್ತಾ ಎಲ್ಲರನ್ನು ಮನರಂಜಿಸುತ್ತಿದ್ದರೆ.



ಡಾ. ವಿಷ್ಣುವರ್ಧನರಿಗೆ ಅಭಿಮಾನಿಗಳು ನೀಡಿದ ಶೀರ್ಷಿಕೆಗಳು


  • ಸಾಹಸ ಸಿಂಹ

  • ಅಭಿನಯ ಭಾರ್ಗವ

  • ಅಭಿನಯ ರಾಜಾಧಿರಾಜ

  • ಕೋಟಿಗೊಬ್ಬ

  • ಕಲದೈವ

  • ಭಾವಶಿಲ್ಪಿ

  • ಮೈಸೂರ ರತ್ನ


ಅವರ ಉತ್ಸಾಹ


  • ಸಿನೆಮಾ ಅಷ್ಟೇ ಅಲ್ಲದೆ ಅವರು ಕ್ರಿಕೆಟ್, ಸಮರ ಕಲೆಗಳು, ಬ್ಯಾಡ್ಮಿಂಟನ್, ಹಾಡುಗಾರಿಕೆ, ಈಜುಗಳಲ್ಲಿ ಆಸಕ್ತಿ ಹೊಂದಿದ್ದರು.


ಡಾ. ವಿಷ್ಣುವರ್ಧನ ಸಾಮಾಜಿಕ ಬದ್ಧತೆ


  • ಡಾ. ವಿಷ್ಣುವರ್ಧನ ಸಾಮರಸ್ಯ ಉತ್ತೇಜಿಸಲು ಮತ್ತು ಪ್ರವಾಹಗಳಲ್ಲಿ ವಿಪತ್ತಿಗೊಳಗಾದ ಜನರಿಗೆ ಸಹಾಯ ಮಾಡಲು ಸ್ನೇಹಲೋಕ ಎಂಬ ಸಂಸ್ಥೆಯನ್ನು ಆರಂಭಿಸಿದರು.

  • ಡಾ. ವಿಷ್ಣುವರ್ಧನ ಗೋಕಾಕ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದೆ.

  • ಅವರು ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವ ಚಟುವಟಿಕೆಗಳಲ್ಲಿ ಭಾಗವಹಿಸಿ ಹಣವನ್ನು ಸಂಗ್ರಹಿಸಿದರು.

  • ಅವರು ಹಣ ಸಂಗ್ರಹಿಸಿ ಕಾರ್ಗಿಲ್ ಯುದ್ಧಕ್ಕೆ ಸಹಾಯ ಮಾಡಿದರು.

  • ತನ್ನ ಪರೋಪಕಾರಿ ಚಟುವಟಿಕೆಗಳಿಗೆ ಸಾಗಿಸು ಮತ್ತು ಕಲೆ ಮತ್ತು ಸಂಗೀತ, ಶೈಕ್ಷಣಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಪ್ರಚಾರ ಸಂಸ್ಥೆಗಳಿಗೆ ಆರ್ಥಿಕ ನೆರವು ಮತ್ತು ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು 2009 ರಲ್ಲಿ 'ವಿಭಾ ಚಾರಿಟೇಬಲ್ ಟ್ರಸ್ಟ್' ಸ್ಥಾಪಿಸಿದರು. ಅವರ ನಿಧನದ ನಂತರ ಟ್ರಸ್ಟ್ ಚಟುವಟಿಕೆಗಳನ್ನು ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರು ಮುಂದುವರಿಸಲಾಗುತ್ತಿದೆ.

ಗುರುತಿಸುವಿಕೆ


  • ಭಾರತೀಯ ಚಿತ್ರರಂಗಕ್ಕೆ ಸುದೀರ್ಘ ಸಲ್ಲಿಸಿದ ಚಲನಚಿತ್ರರಂಗದ "ಜೀವಮಾನದ ಸಾಧನೆ ಪ್ರಶಸ್ತಿ" ಯನ್ನು "ಡಾ.ವಿಷ್ಣುವರ್ಧನ ಪ್ರಶಸ್ತಿ" ಎಂದು ಕರ್ನಾಟಕ ರಾಜ್ಯ ಸರ್ಕಾರವು ಮರುನಾಮಕರಣ ಮಾಡಿದೆ.

  • 30ನೇ ಡಿಸೇಂಬರ್ 2009ರಂದು ಮಧ್ಯರಾತ್ರಿ ಕೊನೆಯುಸಿರೆಳೆದ ನಂತರ ಅವರ ಪಾರ್ಥಿವ ಶರೀರವನ್ನು ಸಕಲ-ಸರ್ಕಾರಿ ಗೌರವದಿಂದ ಅಂತ್ಯ ಸಂಸ್ಕಾರ ಮಾಡಲಾಯಿತು.

  • ಕರ್ನಾಟಕ ಸರ್ಕಾರವು ವಿಷ್ಣುವರ್ಧನರ ಸ್ಮಾರಕವನ್ನು ಕಟ್ಟಿಸಲು 2 ಎಕರೆ ಭೂಮಿ ಮತ್ತು 10 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿ, ಸ್ಮಾರಕ ನಿರ್ಮಿಸುವ ಜವಾಬ್ದಾರಿಯನ್ನು ಡಾ.ವಿಷ್ಣುವರ್ಧನ ಪ್ರತಿಷ್ಠಿತ ಟ್ರಸ್ಟ್ ಗೆ ವಹಿಸಲಾಯಿತು.

  • ಭಾರತ ಸರ್ಕಾರದ ಅಂಚೆ ಸ್ಟಾಂಪಗಳಲ್ಲಿ ವಿಷ್ಣುವರ್ಧನರ ಭಾವಚಿತ್ರವುಳ್ಳ ಸ್ಟಾಂಪಗಳನ್ನು ಹೊರಡಿಸಲಾಗಿದೆ.

  • ಬೆಂಗಳೂರಿನಲ್ಲಿ 14.3 ಕಿಲೋ ಮೀಟರ್ ಉದ್ದದ (ಬನಶಂಕರಿ ಮತ್ತು ಕೆಂಗೇರಿ ನಡುವಿನ ರಸ್ತೆ) ರಸ್ತೆಯನ್ನು ಡಾ.ವಿಷ್ಣುವರ್ಧನ ರಸ್ತೆಯೆಂದು ಹೆಸರಿಸಲಾಗಿದೆ. ಇದು ಏಷ್ಯಾಖಂಡದಲ್ಲೇ ಅತಿ ಹೆಚ್ಚು ಉದ್ದವಾದ ರಸ್ತೆಯೆಂದು ಕರೆಯಲ್ಪಟ್ಟಿದೆ.